ಮನೋರೋಗ ಶಾಪವಲ್ಲ…

 
 
ನೆನಪಿಡಿ:
 
 
೧. ಮನೋರೋಗ ಶಾಪವಲ್ಲ. ಇದು ವಂಶಪಾರಂಪರ್ಯವಾಗಿ ಬರಬೇಕೆಂದೇನೂ ಇಲ್ಲ. ಅವು ಬರಲು ಮದ್ದು, ಮಾಟ, ಮಂತ್ರ , ಭೂತ , ಪ್ರೇತಗಳು ಕಾರಣವಲ್ಲ.
 
೨. ಮೆದುಳಿನಲ್ಲಾಗುವ ಬದಲಾವಣೆ ಮತ್ತು ಹಾನಿಯಿಂದ ಮನೋರೋಗಗಳು ಕಾಣಿಸಿಕೊಳ್ಳುತ್ತವೆ.
 
೩. ಮನೋರೋಗ ಬರಲು ಮೆದುಳಿನ ಬದಲಾವಣೆ ಕಾರಣವೇ ಹೊರತು ವ್ಯಕ್ತಿಯಲ್ಲ. ಆದ್ದರಿಂದ ಮನೋರೋಗಕ್ಕೆ ತುತ್ತಾದ ವ್ಯಕ್ತಿಯನ್ನು ದೂರಿ ಪ್ರಯೋಜನವಿಲ್ಲ.
 
೪. ದೇಹದ ವಿವಿಧ ಭಾಗಗಳಾದ ಹೃದಯ, ಕಿಡ್ನಿಗಳಂತೆ ಮೆದುಳು ಸಹ ಕೆಲವು ಬಾರಿ ಕೈಕೊಡುತ್ತದೆ. ಇದರಿಂದ ಇತರ ರೋಗಗಳಂತೆ ಮೆದುಳು ಸಹ ಕೈಕೊಟ್ಟು ವ್ಯಕ್ತಿ ಮನೋರೋಗಿಯಾಗುತ್ತಾನೆ .
 
೫.ಮನೋರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.
 
೬. ಮನೋರೋಗಿಗಳು ತಮ್ಮ ಸಮಸ್ಯೆಯನ್ನು ಆಪ್ತರ ಬಳಿ ಇಲ್ಲವೇ ಮನೆಯವರ ಬಳಿ ಹೇಳಿಕೊಂಡು ಆದಷ್ಟು ಬೇಗ ಮನೋರೋಗ ತಜ್ಞರನ್ನು ಭೇಟಿ ಮಾಡಬೇಕು. ಯಾರ ಬಳಿ ಹೇಳಿಕೊಳ್ಳಲೂ ಆಗದೆ ಇದ್ದರೆ ಆದರೆ ತಾವೇ ನೇರವಾಗಿ ಮನೋವೈದ್ಯರನ್ನು ಕಾಣಿರಿ. ಈ ಬಗ್ಗೆ ನಿರ್ಲಕ್ಷ್ಯ ಬೇಡ.
 
೭. ಮನೋರೋಗಿಗಳು ಮನೆಯವರ ಆರೈಕೆ ಪ್ರೀತಿ ಮತ್ತು ಪ್ರೋತ್ಸಾಹಗಳಿಂದ  ಆದಷ್ಟು ಬೇಗ ಗುಣಮುಖರಾಗುತ್ತಾರೆ. ಮನೋರೋಗಿಗಳಿಗೆ ಮನೆಯವರ ಪ್ರೀತಿ ಮತ್ತು ವಾತ್ಸಲ್ಯ ಅಗತ್ಯ .
 
೮.  ಯಾವುದೇ ಮನೋರೋಗಿಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಯಾರಿಗೆ ಗೊತ್ತು ಯಾರು ಯಾವಾಗ ಬೇಕಾದರೂ ಮಾನಸಿಕ ರೋಗಕ್ಕೆ ತುತ್ತಾಗಬಹುದು. ಆದರಿಂದ ಮನೋರೋಗಿಗಳ ಬಗ್ಗೆ ತಾತ್ಸಾರ ಮನೋಭಾವನೆ ಬೇಡ.
 
೯. ಮನೋವೈದ್ಯರನ್ನು ಕಾಣಲು ಹೋದಾಗ ತಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಹೇಳಿ. ಯಾವುದೇ ಮುಚ್ಚುಮರೆ ಬೇಡ. ಸಾಧ್ಯವಾದರೆ ಅಲ್ಲಿ ಮನೋರೋಗಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಅಥವಾ ಕಿರುಹೊತ್ತಿಗೆಗಳು ಲಭ್ಯವಿದ್ದರೆ ಅದನ್ನು ಕೊಂಡು ಓದಿ.
 
೧೦. ಔಷಧಿಗಳ ಸೇವನೆ ಮತ್ತು ನಿಲ್ಲಿಸುವ ಸಂಧರ್ಭದಲ್ಲಿ ವೈದ್ಯರ ಸಲಹೆ ಪಡೆಯಿರಿ. ಮನೋರೋಗಕ್ಕೆ ಕೊಡುವ ಔಷಧಿಗಳು ರೋಗ ನಿಯಂತ್ರಣಕ್ಕೆ ಒಂದೆರಡು ತಿಂಗಳ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳು ಅಧಿಕ. ಆ ಸಂಧರ್ಭದಲ್ಲಿ ವಾಸಿಯಾಯಿತೆಂದು ಔಷಧಿ ಸೇವನೆ ನಿಲ್ಲಿಸಬೇಡಿ. ನಿಲ್ಲಿಸುವುದಾದರೆ ಅದು ವೈದ್ಯರ ಸಲಹೆ ಅನುಸರಿಸಿಯಾಗಿರಲಿ.
 
 
 

Leave a comment