ಡಾ: ಸಿ.ಆರ್.ಚಂದ್ರಶೇಖರ್. ಖ್ಯಾತ ಮನೋರೋಗ ತಜ್ಞರು (ವ್ಯಕ್ತಿ ಪರಿಚಯ)

 
ಡಾ:ಸಿ.ಆರ್. ಚಂದ್ರಶೇಖರ್ ಹೆಸರಾಂತ ಮನೋವೈದ್ಯರು. ಬೆಂಗಳೂರಿನ ನಿಮ್ಹಾನ್ಸಿನಲ್ಲಿ ಸುಮಾರು ೨೬ ವರ್ಷಗಳಿಂದ ಮನೋವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚುವರಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಚಿಕಿತ್ಸೆ, ಭೋಧನೆ, ಮತ್ತು ಸಂಶೋಧನಾ ಕೆಲಸಗಳ ಜೊತೆಗೆ ಉಪನ್ಯಾಸ ಮತ್ತು ಬರವಣಿಗೆಗಳ ಮೂಲಕ ಆರೋಗ್ಯ ಶಿಕ್ಷಣವನ್ನೂ ಜನತೆಗೆ ನೀಡುತ್ತಿದ್ದಾರೆ. ಮನೋರೋಗಿಗಳಿಗೆ ಅವರ ಮನೆಯಲ್ಲೇ ಚಿಕಿತ್ಸೆ, ಮಾನಸಿಕ ಅನಾರೋಗ್ಯ ನಿವಾರಣೆ ಮತ್ತು ಮಾನಸಿಕ ಆರೋಗ್ಯವರ್ಧನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ ಮತ್ತು ಭಾರತದಾದ್ಯಂತ ಈ ಸಲುವಾಗಿ ಪ್ರವಾಸ ಮಾಡಿದ್ದಾರೆ. ಮಕಾವ್, ಇಂಗ್ಲೆಂಡ್ , ಯೂರೋಪ್, ಈಜಿಪ್ಟ್ ,ಯಮನ್ ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ .ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
 
೧೯೭೩ ರಿಂದ ಇದುವರೆಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ೯೦೦ ಕ್ಕೂ ಹೆಚ್ಹಿನ ಲೇಖನಗಳನ್ನು ಮತ್ತು ವಿವಿಧ ಪ್ರಕಾಶನ ಸಂಸ್ಥೆಗಳ ಮೂಲಕ ೧೩೦ ಕ್ಕೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಸಾಧನೆಗಳಿಗಾಗಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ , ಡಾ: ಎಸ್ .ಎಸ್. ಜಯರಾಂ ಪ್ರಶಸ್ತಿ,  ಡಾ: ಎಚ್. ನರಸಿಂಹಯ್ಯ ಪ್ರಶಸ್ತಿ, ಲೋಕಶಿಕ್ಷಣ ಇಲಾಖೆಯ ಬಹುಮಾನ , ಸುಧಾ ವಾರಪತ್ರಿಕೆಯ ವಿಶೇಷ ಬಹುಮಾನ, ಡಾ: ಬಿ.ಸಿ. ರಾಯ್ ವೈದ್ಯ ದಿನಾಚರಣೆಯ ಪುರಸ್ಕಾರ , ಕರ್ನಾಟಕ ಚೇತನ ಪುರಸ್ಕಾರ, ಯು.ಜಿ.ಸಿ ಪ್ರಕೃತಿ ಪ್ರಶಸ್ತಿ, ಭಾರತ ಸರ್ಕಾರದ ರಾಷ್ಟ್ರೀಯ ಪುರಸ್ಕಾರದ ಸಹಿತ ಹಲವು ಪ್ರಶಸ್ತಿಗಳು ಲಭಿಸಿವೆ.
 
ಇವರು  ತಮ್ಮ ತಂದೆ ಬಿ.ಎಂ. ರಾಜಣ್ಣಾಚಾರ್ ಮತ್ತು ತಾಯಿ ಎಸ್.ಪಿ. ಸರೋಜಮ್ಮ ಇವರ ಹೆಸರಿನ ಚಾರಿಟೇಬಲ್ ಟ್ರಸ್ಟ್ (ರಿ) ಆಶ್ರಯದಲ್ಲಿ ಸಮಾಧಾನ ಆಪ್ತ ಸಲಹಾ ಕೇಂದ್ರವನ್ನು ನಡೆಸುತ್ತಿದ್ದು ಇಲ್ಲಿ ಸಂಜೆ ೬.೩೦ ರಿಂದ ೮.೩೦ ರವರೆಗೆ ಉಚಿತವಾಗಿ ಮನೋರೋಗಿಗಳನ್ನು ಪರೀಕ್ಷಿಸುತ್ತಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ ಅವರಿಂದ ಉಚಿತ ಪರೀಕ್ಷೆ ಮಾಡಿಸಿಕೊಳ್ಳಬಹುದು.
ಸಮಾಧಾನ ಆಪ್ತ ಸಲಹಾ ಕೇಂದ್ರ

324.  6 ನೇ ಕ್ರಾಸ್.

 ಅರೆಕೆರೆ ಮೈಕೋ ಲೇಔಟ್ ಬಸ್ ನಿಲ್ಧಾಣದ ಹತ್ತಿರ .

ಬನ್ನೇರುಘಟ್ಟ ರಸ್ತೆ. ಬೆಂಗಳೂರು . 560076

 phone: 009180 26482929

Leave a comment