World Mental Health Day

Image

Every year on 10th of October, The World Health Organization joins in celebrating the World Mental Health Day. The day is celebrated at the initiative of the World Federation of Mental Health and WHO supports this initiative through raising awareness on mental health issues using its strong relationships with the Ministries of health and civil society organizations across the globe. WHO also develops technical and communication material and provides technical assistance to the countries for advocacy campaigns around the World Mental Health Day.

The theme of World Mental Health Day in 2013 is “Mental health and older adults”.

Advertisements

ಬದಲಾಗಲಿ ಮನೋಭಾವ

shyness_2134220b

`ನಾನೇನು ಅಪರಾಧ ಮಾಡಿದ್ದೇನೆ? ನನಗೆ ಹುಶಾರಿಲ್ಲ, ಅದೇ ನನ್ನ ಅಪರಾಧವೇ. ಹಾಗಿದ್ದರೆ ಮಾನಸಿಕ ರೋಗ ಹೊಂದಿರುವುದೇ ನಾನು ಮಾಡಿದ ದೊಡ್ಡ ಅಪರಾಧವಾಯಿತೇ?- ಇದು ದೀರ್ಘಕಾಲದಿಂದ ಮಾನಸಿಕ ರೋಗದಿಂದ ಬಳಲುತ್ತಿರುವ ಒಬ್ಬ ರೋಗಿಯ ಆರ್ತನಾದ.   ತನ್ನ ಮಾನಸಿಕ ರೋಗದ ಕಾರಣಕ್ಕಾಗಿ ಸಮಾಜದಿಂದ, ಜನರಿಂದ, ಸ್ನೇಹಿತರಿಂದ, ಕೆಲಸದ ಸ್ಥಳದಲ್ಲಿ… ಹೀಗೆ ಎಲ್ಲ ಕಡೆಯೂ ಎಲ್ಲರೂ ಅವನನ್ನು ಕಳಂಕ ಹೊತ್ತವರಂತೆ ನೋಡುತ್ತಿದ್ದಾರೆ. ಇದು ಈ ಒಬ್ಬ ವ್ಯಕ್ತಿಯ ಅಳಲಲ್ಲ. ಮಾನಸಿಕ ರೋಗದಿಂದ ಬಳಲುತ್ತಿರುವ ಸಾವಿರಾರು, ಅಲ್ಲ, ಲಕ್ಷಾಂತರ ಜನರ ಕೂಗೂ ಹೌದು. ಹಾಗಾದರೆ ಇದಕ್ಕೆ ಯಾರು ಹೊಣೆ? ಹೀಗೆಂದು ನಾವೆಲ್ಲರೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.   ಕಳೆದ 20 ವರ್ಷಗಳ ಹಿಂದೆ ಮನೋರೋಗಕ್ಕೆ ಸಂಬಂಧಿಸಿದಂತೆ ಇದ್ದ ಪರಿಸ್ಥಿತಿಯೇನೋ ಈಗ ಬದಲಾಗಿದೆ. ಮೊದಲು ಯರವಾಡಿ ಜೈಲಿನಂತಹ  ಸ್ಥಳಗಳಲ್ಲಿ ಕಾಲಿಗೆ ಸರಪಳಿ ಹಾಕಿ ಮನೋರೋಗಿಗಳನ್ನು ಕೂಡಿ ಹಾಕುತ್ತಿದ್ದರು. ಒಳ್ಳೆಯ ಚಿಕಿತ್ಸೆ ಲಭ್ಯವಿರಲಿಲ್ಲ.

ಹೌದು, ಇಂತಹ ಭಯಾನಕ ಪರಿಸ್ಥಿತಿ ಈಗಿಲ್ಲ  ನಿಜ. ರೋಗಿಗಳು ಯರವಾಡಿಯಂಥ ಜೈಲಿಗೆ ಹೋಗಬೇಕಾಗಿಲ್ಲ, ಮನೋರೋಗಕ್ಕೆ ಒಳ್ಳೆಯ ಚಿಕಿತ್ಸೆ ಸಹ ಲಭ್ಯವಿದೆ. ಆದರೆ ಮಾನಸಿಕ ರೋಗ ಮತ್ತು ರೋಗಿಗಳೆಡೆಗೆ ನಡೆಸುವ ನಮ್ಮ ತಾರತಮ್ಯ ಮನೋಭಾವ ಬದಲಾಗಿದೆಯೇ? ಖಂಡಿತಾ ಇಲ್ಲ. ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರು, ಮನೆಯವರು, ಸಮಾಜ, ಅಷ್ಟೇ ಏಕೆ ಮಾಧ್ಯಮಗಳಲ್ಲೂ ಕಾಣಿಸಿಕೊಳ್ಳುವ ಈ ತಾರತಮ್ಯದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ನನ್ನಲ್ಲಿ ಬರುವ ಕೆಲವು ರೋಗಿಗಳು ತಮಗೆ ಅಂತಹ ರೋಗ ಇರುವ ಬಗ್ಗೆ ತಮ್ಮ ಸಂಬಂಧಿಕರಿಗೆ ಗುಟ್ಟು ಬಿಟ್ಟುಕೊಡದೆ, ವೇಷ ಮರೆಸಿಕೊಂಡು ಬರುವುದೂ ಉಂಟು.

ಉದ್ಯೋಗದ ಸ್ಥಳ `ಅದೃಷ್ಟವಶಾತ್ ನನಗೆ ಯಾವಾಗಲೂ ಅಂತಹ ಕ್ರೂರ ಅನುಭವ ಆಗಿಲ್ಲ. ಯಾಕೆಂದರೆ, ಯಾವುದೇ ಉದ್ಯೋಗದ ಸಂದರ್ಶನದಲ್ಲಿ ನಾನು ನನಗೆ ಖಿನ್ನತೆ ಆಗಿತ್ತು ಎಂಬ ವಿಷಯವನ್ನೇ ತಿಳಿಸಲಿಲ್ಲ. ತಿಳಿಸಿದ್ದರೆ, ನನಗೆ ಉದ್ಯೋಗವೇ ದೊರಕುತ್ತಿರಲಿಲ್ಲವೇನೋ. ನಾವೂ ಚೆನ್ನಾಗಿ ಕೆಲಸ ಮಾಡಬಲ್ಲೆವು ಎಂಬುದನ್ನು ಈ ಜನ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಲಾರರು’.   ಇದು ಖಿನ್ನತೆಯಿಂದ ಬಳಲಿ, ಈಗ ಚೆನ್ನಾಗಿರುವ ಮತ್ತೊಬ್ಬ ವ್ಯಕ್ತಿಯ ಅಳಲು. ಸಂಶೋಧನೆಯ ಪ್ರಕಾರ, ಮಾನಸಿಕ ರೋಗಿಗಳನ್ನು ಕಳಂಕದಿಂದ ಕೂಡಿದಂತೆ ನೋಡಿ, ಭೇದಭಾವ ಮಾಡುವುದರಿಂದ ಉಂಟಾಗುವ ಪ್ರಮುಖ ತೊಂದರೆ ನಿರುದ್ಯೋಗ. ಉದ್ಯೋಗ ಯಾವುದೇ ವ್ಯಕ್ತಿಯ ಸಕಾರಾತ್ಮಕ ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಅದರಲ್ಲೂ ಮಾನಸಿಕ ರೋಗದಿಂದ ಬಳಲಿ, ಚೇತರಿಸಿಕೊಂಡಿರುವ ವ್ಯಕ್ತಿ ಮತ್ತೆ ಕೆಲಸಕ್ಕೆ ಮರಳುವುದು ಅತಿ ಮುಖ್ಯ.   ಮಾಧ್ಯಮಗಳ ಕೊಡುಗೆ ಮಾಧ್ಯಮಗಳು ಜನರ ಮೇಲೆ ಬೀರುವ ಪರಿಣಾಮ ಹೆಚ್ಚಿನದು. ಕೆಲವು ಬಾರಿ ಅವು ಮಾನಸಿಕ ರೋಗ ಅಥವಾ ರೋಗಿಯ ಬಗೆಗಿನ ವಿಷಯವನ್ನು ತಿರುಚಿ/ ಸತ್ಯಕ್ಕೆ ದೂರವಾದುದನ್ನು ಪ್ರಕಟಿಸುವುದು/ ವೈಭವೀಕರಿಸುವುದು ಸಾಮಾನ್ಯ. ಸಂಶೋಧನೆಯ ಪ್ರಕಾರ, ಟಿ.ವಿ ವಾಹಿನಿಗಳು, ಚಲನಚಿತ್ರಗಳಲ್ಲಿ ತೋರಿಸುವ ಮಾನಸಿಕ ರೋಗಿಗಳ ಪಾತ್ರಧಾರಿಗಳು ನಿಜ ಜೀವನದಲ್ಲಿರುವ ಮಾನಸಿಕ ರೋಗಿಗಳಿಗಿಂತ ಹತ್ತು ಪಟ್ಟು ಹೆಚ್ಚು ಆಕ್ರಮಣಕಾರಿ ಆಗಿರುತ್ತಾರೆ. ಇದರಿಂದ ಮಾನಸಿಕ ರೋಗಿಗಳೆಲ್ಲರೂ ಆಕ್ರಮಣಕಾರಿ ಆಗಿರುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡುತ್ತದೆ. ಹಾಗೆ ನೋಡಿದರೆ ಕೆಲವು ಸಂದರ್ಭಗಳಲ್ಲಿ, ಮನೋರೋಗಿಗಳಿಂದ ಇತರರಿಗೆ ತೊಂದರೆ ಆಗುವುದಕ್ಕಿಂತ ರೋಗಿಗಳಿಗೆ ಬೇರೆಯವರಿಂದ ಆಗುವ ತೊಂದರೆಯೇ ಹೆಚ್ಚು.

ಇನ್ನು ಹಲವು ಬಾರಿ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಮನೋರೋಗಿಗಳನ್ನು ಮೇನಿಯಾಕ್, ಸೈಕೋ, ಸ್ಕೀಜೋಫ್ರೆನಿಕ್ ಎಂದೆಲ್ಲ ಕರೆಯುವುದನ್ನು ನೋಡುತ್ತೇವೆ. ಹಾಗಾದರೆ ಆ ವ್ಯಕ್ತಿಗಳಿಗೆ ಬೇರೆ ರೀತಿಯಲ್ಲಿ ತಮ್ಮದೇ ಆದ, ಗುರುತಿಸುವ ವ್ಯಕ್ತಿತ್ವ ಇರುವುದೇ ಇಲ್ಲವೇ? ಅವರಿಗೆ ಹೆಸರು ಇಲ್ಲವೇ? ದೈಹಿಕ ಕಾಯಿಲೆಗಳು ಬಂದಾಗಲೂ ಜನರನ್ನು ನಾವು ಹಾಗೇ ಕರೆಯುತ್ತೇವೆಯೇ? ಇದು ಕೂಡ ಮನೋರೋಗಿಗಳ ವಿರುದ್ಧ ಸಮಾಜ ಎಸಗುವ ತಾರತಮ್ಯದ ಒಂದು ಆಯಾಮ.   ಕಡಿಮೆ ಮಾಡುವ ಬಗೆ ಕಳಂಕ/ ತಾರತಮ್ಯ ಆಗುವುದು ಮೌಢ್ಯ ಮತ್ತು ಪೂರ್ವಗ್ರಹಪೀಡಿತ ಯೋಚನೆಗಳಿಂದ. ಎಷ್ಟು ಜನಕ್ಕೆ ಮನೋರೋಗದ ಬಗ್ಗೆ, ಮನೋರೋಗಿಗಳ ಬಗ್ಗೆ ಸರಿಯಾದ ಮಾಹಿತಿ ಇದೆ? ಚಿಕಿತ್ಸೆಯ ವಿವಿಧ ರೀತಿಗಳು ತಿಳಿದಿವೆ? ಇಂತಹ ಮಾಹಿತಿಗಳನ್ನು ಜನಸಾಮಾನ್ಯರಲ್ಲಿ ಪ್ರಚಾರಗೊಳಿಸಬೇಕು, ತಪ್ಪು ಕಲ್ಪನೆಗಳನ್ನು ಹೊಡೆದೋಡಿಸಬೇಕು. ರೋಗಿಗೆ, ಅವರ ಕುಟುಂಬದವರಿಗೆ ಕಾಯಿಲೆಯ ಬಗ್ಗೆ ವೈದ್ಯರು ಸರಿಯಾಗಿ ತಿಳಿಸಬೇಕು.   ಲಂಡನ್‌ನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ಸಂಸ್ಥೆ ಮನೋರೋಗದ ಬಗೆಗಿನ ಕಳಂಕವನ್ನು ಕಡಿಮೆ ಮಾಡಲು,1989ರಲ್ಲಿ `ಬದಲಾಗುತ್ತಿರುವ ಮನಸ್ಸು’  (Changing minds)  ಎಂಬ ಅಭಿಯಾನ ಪ್ರಾರಂಭಿಸಿತು. ಇದರ ಧ್ಯೇಯ ವಾಕ್ಯ  `Stop and think’’. ಅಂದರೆ ಎಲ್ಲರೂ ಒಂದು ಕ್ಷಣ ನಿಂತು ನಮ್ಮ ನಡುವಳಿಕೆ/ ಮಾನಸಿಕ ರೋಗಿಗಳ ಎಡೆಗಿನ ನಮ್ಮ ವರ್ತನೆ ಸರಿಯೇ ಎಂಬುದನ್ನು ಯೋಚಿಸಿ, ಅದನ್ನು ಸರಿಪಡಿಸಿಕೊಳ್ಳಬೇಕು. ಇದನ್ನು ನಾವೆಲ್ಲರೂ ಮಾಡಿದರೆ, ಮನೋರೋಗದಿಂದ ಬಳಲುತ್ತಿರುವವರಿಗೆ/ ಅವರ ಕುಟುಂಬದವರಿಗೆ ಖಂಡಿತಾ ಜೀವನ ಸಹನೀಯವಾಗಿ ನೆಮ್ಮದಿಯಿಂದ ಕೂಡಿರುತ್ತದೆ.

 

ಕೃಪೆ : ಪ್ರಜಾವಾಣಿ

ಹೇಗಿದ್ದವರು ಹೇಗಾದರು ಗೊತ್ತಾ …. ?

 ಅದು ಮನೆಯೆಂದರೆ ಮನೆಯೇ ಅಲ್ಲ… ಅಲ್ಲಿರುವುದು ನಾಲ್ಕು ಮಂದಿ ಮಾನಸಿಕ ರೋಗಿಗಳು. ಇಡೀ ಕುಟುಂಬ ದುರ್ಬರ ಬದುಕು ಸಾಗಿಸುತ್ತಿದೆ.…ಎಂದೆನಿಸುತ್ತದೆ.

ಈ ಕುಟುಂಬದ ಬಗ್ಗೆ ಇದುವರೆಗೆ ಇಲ್ಲಿನ ಸ್ಥಳೀಯ ಆಡಳಿತವಾಗಲೀ ಇತರ ಇಲಾಖೆಗಳಾಗಲೀ ಕಣ್ಣು ತೆರೆದು ನೋಡಿಲ್ಲ. ಇದು ಕಡಬ ಸಮೀಪದ ಕುಟ್ರು ಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕೇಪು ಎಂಬಲ್ಲಿನ ಮನೆಯೊಂದರ ಕಥೆ. ಮುಳಿಮಜಲು ಪಕ್ಕದಲ್ಲಿರುವ ಕೇಪು ಎಂಬುದು ತೀರಾ ಹಳ್ಳಿ.

 ಇಲ್ಲಿನ ಇಬ್ರಾಹೀಂ ಸಾಹೇಬ್ ಎಂಬವರ ಕುಟುಂಬದ ಸದಸ್ಯರು ಕಳೆದ ಹಲವು ವರ್ಷಗಳಿಂದ ಈ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರಿಗೆ ಮೂರು ಹೆಣ್ಣು ಮಕ್ಕಳು, ಒಬ್ಬ ಗಂಡು. ಇದರಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಗಂಡು ಮಗ ಮಾನಸಿಕ ರೋಗಿಗಳು. ಇವರ ಪತ್ನಿ ಖತೀಜಾಬಿ ಮಕ್ಕಳ ಸ್ಥಿತಿಯನ್ನು ನೋಡಿಯೇ ತಾನೂ ಮಾನಸಿಕರಂತೆ ವರ್ತಿಸುತ್ತಿದ್ದಾರೆ. ಖತೀಜಾಬಿ ಮಾನಸಿಕರಂತೆ ಕಂಡು ಬಂದರೂ, ಅತ್ತಿತ್ತ ಓಡಾಡುತ್ತಾರೆ.

ಆದರೆ ಮಾತನಾಡಿದರೆ ಒಂದಕ್ಕೊಂದು ಅರ್ಥವೇ ಇಲ್ಲ. ಗಂಡು ಮಗ ಅಬ್ದುಲ್ಲನಿಗೆ ಈಗ ೩೦ ವರ್ಷ. ಆತ ಮನೆ ಬಿಟ್ಟು ಹೊರಗೆ ಬರುವಂತೆಯೇ ಇಲ್ಲ. ಎಕೆಂದರೆ ಮೈಮೇಲೆ ತುಂಡು ಬಟ್ಟೆಯನ್ನ್ನೂ ಇಟ್ಟುಕೊಳ್ಳುವುದಿಲ್ಲ. ಈತ ಕಳೆದ ೮ ವರ್ಷಗಳಿಂದ ಇದೇ ಸ್ಥಿತಿ ಯಲ್ಲಿದ್ದಾನೆ. ಒಂದೇ ಕೋಣೆಯ ಮನೆ ಯೊಳಗೆ ಹುಟ್ಟುಡುಗೆಯಲ್ಲೇ ಇರುತ್ತಾನೆ.

 ಈ ಮನೆಯ ಆಯಿಷಾಬಿ ಹಾಗೂ ಕುಲ್ಸುಂಬಿ ಎಂಬ ಹೆಣ್ಣು ಮಕ್ಕಳು ಕೂಡಾ ಮಾನಸಿಕ ರೋಗಿಗಳು. ಇವರೂ ಮನೆ ಬಿಟ್ಟು ಹೊರಬರುವುದಿಲ್ಲ. ಮನೆಯ ಗೂಡೇ ಇವರ ಜಗತ್ತು. ಹಲವು ವರ್ಷಗಳಿಂದ ಇದೇ ಕಥೆ.

ಈ ಮನೆಯಲ್ಲಿ ಇಬ್ರಾಹೀಂ ಸಾಹೇಬ್ ಹಾಗೂ ಒಬ್ಬ ಮಗಳು ಝುಬೈದಾ ಮಾತ್ರ ಸುಸ್ಥಿತಿಯಲ್ಲಿದ್ದಾರೆ. ಈ ಮನೆಯ ಸ್ಥಿತಿ ನೋಡಿದರೆ ಯಾರೂ ಮಾನಸಿಕ ಸ್ಥಿತಿ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಈ ಕುಟುಂಬಕ್ಕೆ ಎಂಟು ಸೆಂಟ್ಸ್ ಸ್ಥಳ ವಿದೆ.

ಆದರೆ ಈ ತನಕ ಇವರಿಗೊಂದು ಆಶ್ರಯ ಮನೆಯನ್ನು ನೀಡುವ ಕೆಲಸ ಕುಟ್ರುಪ್ಪಾಡಿ ಗ್ರಾ.ಪಂ.ನಿಂದ ನಡೆದಿಲ್ಲ.

 ದುರಂತವೆಂದರೆ ಜಿ. ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿದ್ದ ಆಶಾ ತಿಮ್ಮಪ್ಪ ಗೌಡ ಹಾಗೂ ತಾ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷೆ ಪುಲಸ್ಯ ರೈಯವರ ಕಾರ್ಯಕ್ಷೇತ್ರ ಇದು. ಆದರೆ ಇದುವರೆಗೆ ಯಾವುದೇ ಜನಪ್ರತಿನಿಧಿ ಗಳು ಕೂಡಾ ಇತ್ತ ಕಡೆ ತಲೆ ಹಾಕಿಲ್ಲ. ಆರೋಗ್ಯ ರಕ್ಷಣೆಯ ಹೊಣೆ ಹೊತ್ತ ಆರೋಗ್ಯ ಇಲಾಖೆ ಕೂಡಾ ಈ ಬಗ್ಗೆ ಒಂದಿಷ್ಟು ಗಮನ ಹರಿಸಿಲ್ಲ.

ಯಾರೋ ಮಾಟ ಮಾಡಿದ್ದಾರೆ ಎನ್ನುತ್ತಾರೆ ಈ ಮನೆಯವರು. ಈ ಕಾರಣಕ್ಕೆ ಹಲವಾರು ಮಂತ್ರ-ತಂತ್ರಗಳನ್ನು ಮಾಡಿದ್ದಾರೆ.

ಮೊದ ಮೊದಲು ವೈದ್ಯರಲ್ಲಿ ಚಿಕಿತ್ಸೆಯೂ ಸ್ವಲ್ಪ ಮಟ್ಟಿಗೆ ನಡೆದಿದೆ. ತೀರಾ ಬಡವರಾಗಿರುವುದರಿಂದ ಇದಕ್ಕಿಂತ ಬೇರೇನೂ ಮಾಡುವ ಸ್ಥಿತಿಯಲ್ಲಿಲ್ಲ. ಇವರಿಗೆ ಸಾರ್ವಜನಿಕರ ಸಹಾಯ ಅಗತ್ಯವಿದೆ.-

ಪತ್ರಿಕಾ ವರದಿಗೆ ಸ್ಪಂದಿಸಿದ ಉದ್ಯಮಿಗಳು ಬಡ ಕುಟುಂಬಕ್ಕೆ ನೆರವು

ಪುತ್ತೂರು, ಜು.10: ಕಡಬದ ಕುಟ್ರುಪ್ಪಾಡಿ ಗ್ರಾಮದ ಕೇಪು ಎಂಬಲ್ಲಿ ಒಂದೇ ಕುಟುಂಬದ ನಾಲ್ವರು ಮಾನಸಿಕ ರೋಗಿಗಳು ಸೇರಿದಂತೆ ಮನೆ ಮಂದಿಯೆಲ್ಲರನ್ನೂ ಮೂಡಿಗೆರೆಯ ಮೂವರು ಉದ್ಯಮಿಗಳು ಮಂಗಳೂರಿನ ಕಂಕನಾಡಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಆಧರಿಸಿ ಕಡಬಕ್ಕೆ ಆಗಮಿಸಿದ ಮೂಡಿಗೆರೆಯ ಉದ್ಯಮಿಗಳಾದ ಮುಹಮ್ಮದ್ ಬಿ.ಎಸ್., ಫಿಶ್ ಮೋನು ಮತ್ತು ಅಶ್ರಫ್ ಎಂಬವರು ಸ್ಥಳೀಯರಾದ ಅಶ್ರಫ್, ಹಮೀದ್ ಹಾಜಿ ಹಾಗೂ ಹಮೀದ್ ಎಂಬವರ ನೆರವಿನೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.   

ಶಾಸಕ ಯು.ಟಿ.ಖಾದರ್‌ರ ಸಲಹೆಗಳೊಂದಿಗೆ ಈ ಬಡ ಕುಟುಂಬದ ಆರೋಗ್ಯ ಸೇರಿದಂತೆ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿ ಉದ್ಯಮಿ ಫಿಶ್ ಮೋನು ಪತ್ರಿಕೆಗೆ ತಿಳಿಸಿದ್ದಾರೆ.

ಮ೦ಗಳೂರು : 8 ವರ್ಷಗಳ ಕತ್ತಲೆ ಬದುಕಿನಿಂದ ‘ಸ್ವತಂತ್ರ’ವಾಯಿತು ಈ ಕುಟುಂಬ

 

ಮಂಗಳೂರು, ಆ.15: ಕಳೆದ ಎಂಟು ವರ್ಷಗಳಿಂದ ಮೈ ಮೇಲಿನ ಬಟ್ಟೆ ಬರೆ, ತಿನ್ನುವ ಆಹಾರಗಳ ಬಗ್ಗೆ ಪರಿವೆ ಇಲ್ಲದೆ ಮಾನಸಿಕ ಅಸ್ವಸ್ಥರಾಗಿ ಕಡಬದ ಕುಟ್ರುಪ್ಪಾಡಿ ಗ್ರಾಮದಲ್ಲಿ ಬದುಕು ಸಾಗಿಸುತ್ತಿದ್ದ ಖತೀಜಮ್ಮ, ಆಕೆಯ ಮಗ ಅಬ್ದುಲ್ಲ ಹೆಣ್ಣು ಮಕ್ಕಳಾದ ಆಯಿಶಾಬಿ, ಕುಲ್ಸುಂಬಿ, ಝುಬೈದಾ ಇದೀಗ ದಾನಿಗಳ ಸಹಾಯದಿಂದ ಸೂಕ್ತ ಚಿಕಿತ್ಸೆ ಪಡೆದು ಹೊಸ ಹಾಗೂ ಸ್ವತಂತ್ರ ಬದುಕಿಗೆ ಅಣಿಯಾಗಿದ್ದಾರೆ.

ಪುತ್ತೂರು ತಾಲೂಕಿನ ಕಡಬ ಗ್ರಾ. ಪಂ.ನ ಕೇಪು ಎಂಬಲ್ಲಿನ ಮುಳಿಮಜಲುವಿನ ಗುಡಿಸಲಿನಲ್ಲಿ ಕಳೆದ 8 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ಆಹಾರಕ್ಕೆ ಇನ್ನೊಬ್ಬರಲ್ಲಿ ಕೈ ಚಾಚುವ, ಇದ್ದ ಅಕ್ಕಿಯನ್ನು ಸರಿಯಾಗಿ ಬೇಯಿಸಿಯೂ ತಿನ್ನದಂತಹ ಅತ್ಯಂತ ಸಂಕಷ್ಟದಲ್ಲಿ ಈ ಬಡಕುಟುಂಬ ಸಾಗಿಸುತ್ತಿತ್ತು.

30 ವರ್ಷ ದಾಟಿದ ಯುವಕ ಅಬ್ದುಲ್ಲ ಮಾನಸಿಕ ಸ್ಥಿಮಿತ ಕಳೆದುಕೊಂಡು ಮೈಮೇಲೆ ಬಟ್ಟೆ ಹಾಕಿಕೊಳ್ಳದೆ ಓಡಾಡುವಂತಾಗಿತ್ತು. ಇವರ ಮೂವರು ಸಹೋದರಿಯರು ಎಂಟು ವರ್ಷದಲ್ಲಿ ಮಾನಸಿಕ ರೋಗಿಗಳಾಗಿ ಪರಿವರ್ತನೆಗೊಂಡಿದ್ದರು. ಈ ಬಗ್ಗೆ ಜುಲೈಯಲ್ಲಿ ‘ವಾರ್ತಾಭಾರತಿ’ ಪತ್ರಿಕೆ ವಿವರವಾದ ವರದಿ ನೀಡಿ ಸಮಾಜದ ಗಮನ ಸೆಳೆದಿತ್ತು.

ಈ ಕುಟುಂಬದ ದಯನೀಯ ಸ್ಥಿತಿಯ ಬಗ್ಗೆ ಅರಿತು ಮುಂದೆ ಬಂದ ದಾನಿಗಳು ಸಹಾಯ ನೀಡಿದ್ದರಿಂದ ಈಗ 5 ಮಂದಿ ಚೇತರಿಸಿ ಕೊಂಡಿದ್ದಾರೆ. ಅವರಿಗೆ ಮುಂದಿನ ಹಂತದಲ್ಲಿ ಜೀವನಕ್ಕೆ ಪ್ರತ್ಯೇಕ ಸ್ಥಳದಲ್ಲಿ ಮನೆ ಹಾಗೂ ಸಹಾಯಕರನ್ನು ನೇಮಿಸಿ ಆ ಕುಟುಂಬಕ್ಕೆ ನೆರವಾಗಲು ಮಂಗಳೂರಿನ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕ ಕಡಬದ ಸಾಹಿರಾ ಫ್ಯಾನ್ಸಿಯ ಅಶ್ರಫ್, ಚಿಕ್ಕಮಗಳೂರಿನ ವ್ಯಾಪಾರಿ (ಫಿಶ್ ಮೋನು) ಮೋನು, ಅಹ್ಮದ್ ಮೂಡಿಗೆರೆ, ಮುಹಮ್ಮ ದ್ ಬಿ.ಎಚ್. ಆರ್ಥಿಕ ಸಹಾಯ ನೀಡಿದ್ದಾರೆ.

ಇವರಿಗೆ ಮೈ ಮೇಲೆ ಬಟ್ಟೆ ಹಾಕಿಕೊಳ್ಳಬೇಕು ಎಂಬ ಪರಿವೆಯೂ ಇರಲಿಲ್ಲ. ಇನ್ನು ಶುಚಿತ್ವದ ಬಗ್ಗೆ ಮಾತನಾಡುವಂತೆಯೇ ಇರಲಿಲ್ಲ. ಇದ್ದುದರಲ್ಲಿ ಅಲ್ಪಸ್ವಲ್ಪ ಮಾನಸಿಕವಾಗಿ ಆರೋಗ್ಯವಾಗಿದ್ದ ಖತೀಜಾಬಿ ಹಾಗೂ ಆಕೆಯ ಮಗಳು ಕಡಬ ಪೇಟೆಗೆ ಬಂದು ಬಿಕ್ಷೆ ಬೇಡಿ ಕುಟುಂಬದ ಹಸಿವೆ ನೀಗಿಸಲು ಪ್ರಯತ್ನಿಸುತ್ತಿದ್ದರು.

ಆದರೂ ಇಡೀ ಕುಟುಂಬ ಈ ರೀತಿಯಾಗಿ ಬದುಕುತ್ತಿದೆ ಎನ್ನುವ ವಿಚಾರ ಹಲವು ವರ್ಷಗಳವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಇವರ ಬಗ್ಗೆ ತಿಳಿದ ಕೆಲವರು ಸ್ಥಳದ ದೋಷ, ಮಾಟ ಮಂತ್ರ ಮಾಡಿದ್ದಾರೆ, ಮದ್ದು ಹಾಕಿದ್ದಾರೆ ಎಂದು ಹೇಳಿ ತಾಯಿತ, ನೂಲು ಕೊಡುತ್ತಿದ್ದರೆ ಹೊರತು ಅವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲು ಪ್ರಯತ್ನಿಸಿರಲಿಲ್ಲ.

-ಕರುಣಾಜನಕ ಬದುಕು: ಖತೀಜಾಬಿ ಮತ್ತು ಆಕೆಯ ನಾಲ್ಕು ಮಕ್ಕಳು ಹುಟ್ಟಿನಿಂದ ಮಾನಸಿಕ ರೋಗಿಗಳಾಗಿರಲಿಲ್ಲ. ಕಡಬದ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಅಶ್ರಫ್‌ರಿಗೆ ಈ ಕುಟುಂಬದ ಕೆಲವು ಸದಸ್ಯರ ಬಗ್ಗೆ ಕಳೆದ 6 ವರ್ಷಗಳಿಂದ ಪರಿಚಯವಿದೆ. ಆದರೆ, ಇಡೀ ಕುಟುಂಬ ಯಾವ ರೀತಿಯಲ್ಲಿದೆ ಎಂದು ಗೊತ್ತಿರಲಿಲ್ಲ. ತನ್ನ ಅಂಗಡಿಗೆ ಬಂದಾಗ ಬಡವರು ಎನ್ನುವ ಕಾರಣಕ್ಕಾಗಿ ಅಲ್ಪಸ್ವಲ್ಪ ಅಕ್ಕಿ, ಮನೆಗೆ ಬೇಕಾದ ಸಾಮಗ್ರಿ ಕೊಟ್ಟು ಕಳುಹಿಸುತ್ತಿದ್ದರು. ಆ ಕಾರಣದಿಂದ ಆ ಕುಟುಂಬಕ್ಕೆ ಅಶ್ರಫ್ ವಿಶ್ವಾಸ ಪಾತ್ರರಾಗಿದ್ದರು.

ಅದೇ ಅಶ್ರಫ್ ಈ ಕುಟುಂಬದ ಬಗ್ಗೆ ತಿಳಿದುಕೊಂಡು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಚಿಕಿತ್ಸೆಗಾಗಿ ಮಂಗಳೂರಿನ ಜಮಾಅತೆ ಇಸ್ಲಾಮೀ ಹಿಂದ್ ಘಟಕದ ಸಹಾಯ ಯಾಚಿಸಿದಾಗ ಅವರು ಆಸ್ಪತ್ರೆಗೆ ಸೇರಿಸಲು ಸೂಚಿಸಿದರು ಮತ್ತು ಆರ್ಥಿಕ ಸಹಾಯದ ಭರವಸೆ ನೀಡಿದರು.

ಆ ಪ್ರಕಾರ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಮೂಡಿಗೆರೆ, ಚಿಕ್ಕಮಗಳೂರಿನ ದಾನಿಗಳಾದ ಅಹ್ಮದ್, ಫಿಶ್ ಮೋನು, ಮುಹಮ್ಮದ್ ಬಿ.ಎಚ್. ಸಹಾಯ ಹಸ್ತ ನೀಡಿದ್ದರ ಪರಿಣಾಮವಾಗಿ ಜುಲೈ 10ರಂದು ಆಸ್ಪತ್ರೆ ಕಂಕನಾಡಿ ಫಾದರ್ ಮುಲ್ಲರ್ಸ್‌ ಆಸ್ಪತ್ರೆ ಸೇರಿದ ಕುಟುಂಬದ ಐದು ಮಂದಿಯೂ ಚೇತರಿಸಿಕೊಂಡಿದ್ದಾರೆ.

ಖತೀಜಾಬಿ ಇಬ್ರಾಹೀಂ ಸಾಹೇಬ್ ಎಂಬವರ ಎರಡನೆಯ ಹೆಂಡತಿ. ಇಬ್ರಾಹಿಂ ಸಾಹೇಬರೀಗ ಮೊದಲ ಹೆಂಡತಿಯ ಜತೆ ವಾಸವಾಗಿದ್ದಾರೆ. ಮೊದಲ ಪತ್ನಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಖತೀಜಾಬಿಯನ್ನು ಇಬ್ರಾಹಿಂ ಸಾಹೇಬ್ ಮದುವೆಯಾಗಿದ್ದರು. ಬಳಿಕ ಮೊದಲ ಹೆಂಡತಿಗೂ ಮಕ್ಕಳಾಯಿತು. ಆ ಬಳಿಕ ಮೊದಲ ಹೆಂಡತಿಯೊಂದಿಗೆ ಇಬ್ರಾಹೀಂ ಸಾಹೇಬ್ ಇರಲಾರಂಭಿಸಿದರು.

ಖತೀಜಾಬಿ ಹಾಗೂ ಆಕೆಯ ನಾಲ್ವರು ಮಕ್ಕಳು ಸಣ್ಣ ಗುಡಿಸಲು ಕಟ್ಟಿಕೊಂಡು ಜೀವಿಸಲಾರಂಭಿಸಿದರು. ಆ ಬಳಿಕ ಈ ಕುಟುಂಬ ಆರ್ಥಿಕ ಸಹಾಯ ಇಲ್ಲದೆ ಅತಂತ್ರಗೊಂಡು ಶಿಕ್ಷಣ, ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ಸರಿಯಾದ ಆಹಾರವೂ ಇಲ್ಲದೆ ಮಾನಸಿಕ ಅಸ್ವಸ್ಥರಾದರೆಂದು ಈ ಕುಟುಂಬದ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಇರುವ ಅಶ್ರಫ್ ಹೇಳುತ್ತಾರೆ.

ಹೊಸ ಬದುಕು: ಇದೀಗ ಖತೀಜಾಬಿ, ಅಬ್ದುಲ್ಲ, ಝುಬೈದಾ, ಆಯಿಶಾಬಿ, ಕುಲ್ಸುಂಬಿ ಹೊಸ ಮನೆಗೆ ತೆರಳಿದ್ದಾರೆ. ಸರಿಯಾಗಿ ಬಟ್ಟೆ ಧರಿಸಿದ್ದಾರೆ. ಈ ಕುಟುಂಬಕ್ಕೆ ಹೊಸ ವಾತಾವರಣದೊಂದಿಗೆ ಇನ್ನೂ ಕೆಲವು ಕಾಲ ಸೂಕ್ತ ಮಾರ್ಗದರ್ಶನ ದೊರೆತರೆ ಉತ್ತಮ ಬದುಕು ಸಾಗಿಸಬಹುದು ಎಂಬ ಆಶಾಭಾವವನ್ನು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ವ್ಯಕ್ತಪಡಿಸುತ್ತಾರೆ.

 
 
ಸಂದೇಶ :
 
ಮಾನಸಿಕ ಅಸ್ವಸ್ಥರು ಸಮಾಜದ ಸಹಾಯ ಮತ್ತು ಸಹಕಾರ ಹಾಗೂ ವೈದ್ಯಕೀಯ ಚಿಕಿತ್ಸೆ ದೊರೆತಲ್ಲಿ ಆರೋಗ್ಯವಂತರಾಗಬಲ್ಲರು ಎಂಬುವುದಕ್ಕೆ ಈ ಪ್ರಕರಣ ಸಹ ಒಂದು ಉದಾಹರಣೆ . ಮಾನಸಿಕ ರೋಗಿಗಳನ್ನು ನಿರ್ಲಕ್ಷಿಸದೆ ಭೂತ , ಮಂತ್ರ , ಪಿಶಾಚಿ, ಮಾಟ ಎಂಬ ಮೂಢನಂಬಿಕೆಗಳಿಗೆ ಬಲಿಯಾಗದೆ ಅವರಿಗೆ ಸೂಕ್ತ ಮನೋ ವೈದ್ಯರಿಂದ ಚಿಕಿತ್ಸೆ ಕೊಡಿಸಲು ನೆರವಾಗಿರಿ. ಆ ಮೂಲಕ ಅವರ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸಿರಿ.

ಮಣಿಪಾಲದ ಮನೋವೈದ್ಯರುಗಳ ಹೆಸರು ಮತ್ತು ವಿಳಾಸ

 
 
 Dr. Jyothi Shetty
Specialty
Psychiatrist
City
Manipal
State
Karnataka
Country
India
Address
Dept Of Psychiatry, Kasturba Medical College
Pin Code
576119

 

 
Dr. Nilambar Dharkar
Specialty
Psychiatrist
City
Manipal
State
Karnataka
Country
India
Address
Dept Of Psychiatry, Kasturba Medical College
Pin Code
576119

 

 
Dr. P John Alexander
Specialty Psychiatrist
City Manipal
State Karnataka
Country India
Address Associate Prof Dept Of Psy, Kasturba Medical College
Pin Code 576119
 
 
 
Dr. P S V N Sharma
Specialty
Psychiatrist
City
Manipal
State
Karnataka
Country
India
Address
H O D Psychiatry, Kasturba Medical College
Pin Code
576119

 

 
Dr. Somnath Sen Guptha
Specialty Psychiatrist
City Manipal
State Karnataka
Country India
Address Dept Of Psychiatry, Kasturba Medical College
Pin Code 576119.

ತುಮಕೂರಿನ ಮನೋವೈದ್ಯರ ಹೆಸರು ಮತ್ತು ವಿಳಾಸ

 
 
Dr. Nagendra
Specialty
Psychiatrist
City
Tumkur
State
Karnataka
Country
India
Address
Dept Of Psychiatry, Siddartha Medical College

 

 
Dr. Satyanarayanan
Specialty Psychiatrist
City Tumkur
State Karnataka
Country India
Address Shridevi Hospital, 1st Cross
Pin Code 572101

ಉಡುಪಿಯ ಮನೋವೈದ್ಯರು

 
Dr. Sripathy M Bhat
Specialty Psychiatrist
City Udupi
State Karnataka
Country India
Address Mithra Hospital,
Pin Code 576101

ಶಿವಮೊಗ್ಗದ ಮನೋವೈದ್ಯರುಗಳ ಹೆಸರು ಮತ್ತು ವಿಳಾಸ

 
Dr. Ashok Pai
Specialty Psychiatrist
City Shimoga
State Karnataka
Country India
Address Manasa Nursing Home, Tilak Nagar
   
Pin Code 577201

 

 
 
Dr. Ram Prasad , M.D (Psychiatry)
Specialty Psychiatrist
City Shimoga
State Karnataka
Country India
Address SIMS SHIMOGA
Qualification M.D (Psychiatry)
University RGUHS